ಕೆಲ್ವಿನ್, ವಿಲಿಯಂ ಥಾಮ್ಸನ್, ಲಾರ್ಡ್
1824-1907. ಸ್ಕಾಟ್ಲೆಂಡಿನ ಗಣಿತ ಹಾಗೂ ಭೌತವಿಜಾÐನಿ.  ಜನನ ಐರ್ಲೆಂಡಿನ ಬೆಲ್‍ಫಾಸ್ಟಿನಲ್ಲಿ, 1824ರ ಜೂನ್ 26ರಂದು.  ಇವನ ತಂದೆ ಜೇಮ್ಸ್ ಥಾಮ್ಸನ್ ಆ ಕಾಲದ ಪ್ರಸಿದ್ಧ ಗಣಿತ ಪ್ರಾಧ್ಯಾಪಕ.  ಅಣುಗ ವಿಲಿಯಂ ಗಣಿತದಲ್ಲಿ ಅಸಾಮಾನ್ಯ ಪ್ರತಿಭೆಯನ್ನು ತೀರ ಎಳವೆಯಲ್ಲಿ ಪ್ರದರ್ಶಿಸಿದ ಪವಾಡ ಶಿಶು.  ತಂದೆಯ ಉಪನ್ಯಾಸಗಳನ್ನು ಅತ್ಯಾಸಕ್ತಿಯಿಂದ ಕೇಳಿ ತಿಳಿದುಕೊಂಡಾದ ಈತನ ಪ್ರಾಯ ಕೇವಲ ಎಂಟು.  1845ರಲ್ಲಿ ವಿಶ್ವವಿದ್ಯಾನಿಲಯದ ಪದವೀಧರನಾದ.  ಮರುವರ್ಷ ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ನೈಸರ್ಗಿಕ ಶಾಸ್ತ್ರಗಳ ಅಧ್ಯಾಪಕನಾಗಿ ನೇಮಕಗೊಂಡ.  ಅರ್ಧ ಶತಮಾನಕ್ಕೂ ಮಿಕ್ಕಿದ ಸೇವಾವಧಿಯಲ್ಲಿ ಕೆಲ್ವಿನ್ ನಡೆಸಿದ ಪ್ರಯೋಗಗಳ ಮತ್ತು ತಾತ್ತ್ವಿಕ ವಿಮರ್ಶೆಗಳ ವ್ಯಾಪ್ತಿ ಅಪರಿಮಿತವಾಗಿದೆ.  ಬಹುಶಃ ಈತ ಮಾಡಿದ ಮೊತ್ತ ಮೊದಲಿನ ಅವಿಷ್ಕಾರ ಭೂಮಿಯ ವಯಸ್ಸನ್ನು ಕುರಿತು.  ಸೂರ್ಯನಿಂದ ಸಿಡಿದ ಅನಿಲದ ಹನಿ ಭೂಮಿ ಎಂದೂ ಸ್ಥಿರ ದರದಲ್ಲಿ ಭೂಮಿ ಉಷ್ಣನಷ್ಟವನ್ನು ಅನುಭವಿಸಿ ಇಂದಿನ ಉಷ್ಣತೆಯನ್ನು ಪಡದಿದೆಯೆಂದೂ ಈತ ಭಾವಿಸಿದ.  ಈ ಅಂಗೀಕೃತ ಭಾವನೆಗಳ ಆಧಾರದಿಂದ ಭೂಮಿಯ ವಯಸ್ಸು 20 ಮಿಲಿಯನ್‍ನಿಂದ 400 ಮಿಲಿಯನ್ ವರ್ಷಗಳ ವರೆಗೆ ಎಂದು ತೀರ್ಮಾನಿಸಿದ; ಪ್ರಾಯಶಃ ಅದು 100 ಮಿಲಿಯನ್ ವರ್ಷಗಳಿರಬಹುದೆಂದು ಅಂದಾಜು ಸೂಚಿಸಿದ.  ಕೆಲ್ವಿನ್ನನ ಈ ವಾದ ಅಂದು ಭೂವಿಜಾÐನಿಗಳ ತೀಮಾನಕ್ಕೆ ತೀರ ವಿರೋಧವಾಗಿತ್ತು.  ಹೀಗಾಗಿ ವಿಜಾÐನ ಪ್ರಪಂಚದಲ್ಲಿ ದೊಡ್ಡ ಗೊಂದಲವೇ ಉಂಟಾಯಿತು.  ಭೂಮಿಗೆ ಸ್ವತಂತ್ರವಾಗಿ ಉಷ್ಣೋತ್ಪಾದನೆ ಮಾಡುವ ಸಾಮಥ್ರ್ಯವಿಲ್ಲ ಎಂಬುದು ಕೆಲ್ವಿನ್ನನ ವಾದದಲ್ಲಿ ಅಧ್ಯಾಹಾರವಾಗಿದೆ.  ಇದು ಸರಿಯಿಲ್ಲ; ಭೂಮಿಯಲ್ಲಿರುವ ರೇಡಿಯೋವಿಕಿರಣ ಧಾತುಗಳ ನಿರಂತರ ವಿದಳನದಿಂದ ಉಷ್ಣೋತ್ಪತ್ತಿಯಾಗುತ್ತದೆ; ಆದ್ದರಿಂದ ಬಾಹ್ಯ ಉಷ್ಣನಷ್ಟವೇನೇ ಇದ್ದರೂ ಈ ಆಂತರಿಕ ಉಷ್ಣದ ಉತ್ಪತ್ತಿಯ ಪರಿಣಾಮವಾಗಿ ಭೂಮಿ ಬಹುಕಾಲ ಒಂದೇ ಉಷ್ಣತೆಯನ್ನು ಕಾಯ್ದಿಟ್ಟು ಕೊಳ್ಳಬಲ್ಲುದು ಮಾತ್ರವಲ್ಲ; ಹಲವು ವೇಳೆ ಇದು ಏರುವುದೂ ಸಾಧ್ಯ ಉಂಟು.  ಕೆಲ್ವಿನ್ನನ ವಾದಕ್ಕೆ ಇಂದು ಉಳಿದಿರುವುದು ಕೇವಲ ಐತಿಹಾಸಿಕ ಮಹತ್ವ ಮಾತ್ರ.
ಕೆಲ್ವಿನ್ ಮಾಡಿದ ಮುಂದಿನ ಪ್ರಯೋಗಗಳು ಉಷ್ಣವಿಜ್ಞಾನಕ್ಕೆ ಸಂಬಂಧಿಸಿದವು.  ಈ ಕ್ಷೇತ್ರದಲ್ಲಿ ಈತ ಜೇಮ್ಸ್ ಪೆಸ್ಕಟ್ ಜೌಲ್ ಎಂಬ ವಿಜ್ಞಾನಿಯೊಡನೆ ಕೆಲಸ ಮಾಡಿ ಜೌಲ್-ಥಾಮ್ಸನ್ ಪರಿಣಾಮವನ್ನು ಆವಿಷ್ಕರಿಸಿದ.  ಅನಿಲಗಳು ಒಂದು ನಿರ್ವಾತ ಪ್ರದೇಶದಲ್ಲಿ ವಿಕಾಸಗೊಳ್ಳುವಾಗ ಅವುಗಳ ಉಷ್ಣತೆಯ ಮುಟ್ಟ ಹೇಗೆ ತಗ್ಗುತ್ತದೆ ಎನ್ನುವುದನ್ನು ಕುರಿತ ಅಧ್ಯಯನವಿದು.  ಆ ಮೊದಲೇ ಚಾರಲ್ಸ್ ಹೇಳಿದ್ದ ನಿಯಮದ (ಪ್ರತಿ 10 ಸೆಂ. ಉಷ್ಣತೆಯ ಕುಸಿತಕ್ಕೂ ಅನಿಲಗಳು ಅವುಗಳ 00ಯಲ್ಲಿನ ಘನಗಾತ್ರದ 1/273ರಷ್ಟನ್ನು ಕಳೆದುಕೊಳ್ಳುತ್ತವೆ ಎಂಬ ಆವಿಷ್ಕಾರ) ಪರಿಣಾಮಗಳನ್ನು ಕೆಲ್ವಿನ್ ಪರಿಶೋಧಿಸಿ ಹೊಸ ಒಂದು ನಿಯಮವನ್ನು ಸ್ಥಾಪಿಸಿದ (1848).  ಅದರ ಪ್ರಕಾರ-2730ಸೆಂ.ನಲ್ಲಿ ಅನಿಲಗಳ (ಘನಗಾತ್ರವಲ್ಲ) ಅಣುಗಳ ಚಲನಶಕ್ತಿ ಶೂನ್ಯವನ್ನೈದುತ್ತದೆ ಎಂದಿತ್ತು.  ಆದ್ದರಿಂದ ತಾತ್ತ್ವಿಕವಾಗಿ ಸೆಂಟಿಗ್ರೇಡ್ ಮಾನಕದಲ್ಲಿ-2730ಸೆಂ.  ನಿಜವಾದ ಶೂನ್ಯವಾಗಬೇಕು ಎಂದು ಕೆಲ್ವಿನ್ ತೀಮಾನಿಸಿದ.-2730ಸೆಂ.ಗೆ  ನಿರಪೇಕ್ಷ ಶೂನ್ಯ ಎಂದು ಹೆಸರು.  ಉಷ್ಣತೆಯ ನರಪೇಕ್ಷ ಮಾನಕದ ಆರಂಭ ಬಿಂದು ಈ ಶೂನ್ಯ.  ನರಪೇಕ್ಷ ಮಾನಕಕ್ಕೆ ಕೆಲ್ವಿನ್ ಮಾನಕವೆಂದೂ ಹೆಸರುಂಟು.  (ನಿರಪೇಕ್ಷ ಶೂನ್ಯದ ಆಧುನಿಕ ನಿಖರ ಬೆಲೆ-2730.16ಸೆಂ.) 
(ನೋಡಿ- ಉಷ್ಣತೆ) 
(ನೋಡಿ- ಉಷ್ಣಮಾಪನ)
 ಉಷ್ಣವನ್ನು ಕುರಿತ ಆಧುನಿಕ ವಿಚಾರ ಲಹರಿಯ ಪ್ರವರ್ತಕರಲ್ಲಿ ಕೆಲ್ವಿನ್ ಒಬ್ಬ.  ಮುಂದೆ ಇಂಥದೇ ಆಸಕ್ತಿಯನ್ನು ಈತ ದೂರವಾರ್ತಾ ಪ್ರೇಷಣೆಯಲ್ಲಿ (ಟೆಲಿಗ್ರಾಫಿ) ತೋರಿಸಿದನಲ್ಲದೆ ಅದರಲ್ಲಿ ಹಲವಾರು ಆವಿಷ್ಕಾರಗಳನ್ನೂ ಮಾಡಿದ.  ಲೀಡನ್ ಜಾಡಿಯನ್ನು ಉಪಯೋಗಿಸಿ ಆವರ್ತಶೀಲ ವಿದ್ಯುದುತ್ಸರ್ಜನೆಗಳ (ಎಲೆಕ್ಟ್ರಿಕ್ ಡಿಸ್‍ಚಾರ್ಜಸ್) ಲಕ್ಷಣಗಳನ್ನು ಪರೀಕ್ಷಿಸಿದ.  ದೂರವಾರ್ತಾ ಲೇಖನದಲ್ಲಿನ ಕೇಬಲ್‍ಗಳನ್ನು ಪರಿಷ್ಕರಿಸಿ ಶಿಷ್ಟೀಕರಿಸಿದ.  ಇವನ ಇತರ ಆವಿಷ್ಕಾರಗಳಲ್ಲಿ ಇಳಿತ ಭರತಗಳ ತೀವ್ರತೆಯನ್ನಳೆಯುವ ಉಪಕರಣ, ನೀರಿನ ಆಳವನ್ನಳೆಯುವ ವಿಧಾನ ಮೊದಲಾದವು ಮತ್ತಷ್ಟು ಸುಧಾರಣೆಗೊಂಡು ಇಂದಿಗೂ ಉಪಯೋಗದಲ್ಲಿವೆ.
ವೃದ್ಧಾಪ್ಯದಲ್ಲಿ ಕೆಲ್ವಿನ್‍ನ ಬುದ್ದಿ ಒಂದು ವಿಧದ ಜಡತ್ವವನ್ನು ಪಡೆಯಿತು.  1880ರಲ್ಲಿ ಅವನೊಂದು ಹೇಳಿಕೆ ನೀಡಿದನೆಂದೂ ವರದಿ ಆಗಿದೆ.  ಅದರ ಪ್ರಕಾರ ಭೌತ ವಿಜಾÐನದಲ್ಲಿ ಆವಿಷ್ಕಾರಗಳೆಲ್ಲವೂ ಮುಗಿದು ಹೋಗಿವೆ; ಮುಂದೆ ಏನಿದ್ದರೂ ಗೊತ್ತಿರುವ ಫಲಿತಾಂಶಗಳ ಪರಿಷ್ಕರಣ ಮಾತ್ರ ಸಾಧ್ಯ ಎಂದಿತ್ತಂತೆ.  ಆದರೆ ತನ್ನ ಜೀವಮಾನ ಫಲಿತಾಂಶಗಳ ಪರಿಷ್ಕರಣ ಮಾತ್ರ ಸಾಧ್ಯ ಎಂದಿತ್ತಂತೆ.  ಆದರೆ ತನ್ನ ಜೀವಮಾನ ಕಾಲದಲ್ಲಿಯೇ ಭೌತವಿಜಾÐನ ಆ ಹಿಂದೆಂದೂ ಕಾಣದ ಮಹಾ ಕ್ರಾಂತಿಯನ್ನು ರೇಡಿಯೋ ವಿಕಿರಣಶೀಲ ಧಾತುಗಳ ಮೂಲಕ ಸಾಧಿಸಿದ್ದನ್ನು ಈತ ಕಂಡ.
1907ರ ಡಿಸೆಂಬರ್ 17ರಂದು ಕೆಲ್ವಿನ್ ಗತಿಸಿದ. ವೆಸ್ಟ್ ಮಿನ್ಸ್‍ಟರ್ ಅಬೆಯಲ್ಲಿ ನ್ಯೂಟನ್ನನ ಗೋರಿಯ ಪಕ್ಕದಲ್ಲಿಯೇ ಈತನನ್ನು ಸಮಾಧಿ ಮಾಡಿ ಜನಾಂಗ ತನ್ನ ಗೌರವವನ್ನು ಈತನಿಗೆ ವ್ಯಕ್ತಪಡಿಸಿತು.
      (ನೋಡಿ- ಕೆಲ್ವಿನ್-ಉಷ್ಣತಾಮಾನ-ಪದ್ಧತಿ)                               
         (ಯು.ಎಲ್.ಎ.)